Home
             Grievances
             City Finances
             City Council
             City Staff
             City Statistics
             Tourism
             Contact Us
         Modules Being Developed
                  Property Tax
              Financials
              Birth/Death
  

OLD NEWS

            

ಮನೆ ಮನೆ ಕಸ ಸಂಗ್ರಹಣಾ ಜಾಥಾ ದಿ:30/04/2010 - ಕರೆಯೋಲೆ.

        ಪುರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಸಂಗ್ರಹಣೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ ಪುತ್ತೂರು ನಗರವನ್ನು ಮಾದರಿ ನಗರವನ್ನಾಗಿಸುವ ಸಲುವಾಗಿ ಪುತ್ತೂರು ಪುರಸಭಾ ವತಿಯಿಂದ ದಿನಾಂಕ: 30/04/2010 ರಂದು ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಮಾನ್ಯ ಉಡುಪಿ ಜಿಲ್ಲಾ ಸಂಸದರಾದ ಶ್ರೀ ಸದಾನಂದ ಗೌಡ ಇವರು ಉದ್ಘಾಟಿಸಿದರು. ಸದ್ರಿ ಜಾಥಾವನ್ನು ಪುತ್ತೂರು ವಿಧಾನ ಸಭಾ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಿದರು. ಜಾಥಾದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ರಾಜೇಶ್ ಬನ್ನೂರು, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಡಾ| ಹರೀಶ್ ಕುಮಾರ್,  ಮುಖ್ಯಾಧಿಕಾರಿ ಎ.ಎಸ್.ರಾಣೆ, ಪುರಸಭಾ ಸದಸ್ಯರುಗಳು, ಸಿಬ್ಬಂದಿ ವರ್ಗದವರು, ದಕ್ಷಿಣ ಕನ್ನಡ ಜಿಲ್ಲಾ ವಿವಿಧ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರುಗಳು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಮತ್ತು ಸರಕಾರೇತರ ಸಂಘಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

Photo gallery

 


       ದಿನಾಂಕ: 14/04/2010 ರಂದು ಪುತ್ತೂರು ಪುರಸಭಾ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ . ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ರಾಜೇಶ್ ಬನ್ನೂರು ಇವರ ಅಧ್ಯಕ್ಷತೆಯಲ್ಲಿ  ಆಚರಿಸಲಾಯಿತು.ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಶ್ರೀ ಎ.ಎಸ್ .ರಾಣೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


    ದಿನಾಂಕ: 19.03.2010 ರಂದು ಪುತ್ತೂರು ಪುರಸಭಾ ಕಛೇರಿಯ ಶೇ.22.75 ರ ನಿಧಿಯ ವತಿಯಿಂದ ಪುತ್ತೂರು ಪುರಭವನದಲ್ಲಿ ಪ.ಜಾತಿ/ಪ.ಪಂಗಡದ 5 ರಿಂದ 7 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕೈಗಡಿಯಾರ, ಪುರಸಭಾ ವ್ಯಾಪ್ತಿಯ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವು ಮಾನ್ಯ ಪುರಸಭಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಮಾರಂಭದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಡಾ| ಹರೀಶ್ ಕುಮಾರ್, ಪುತ್ತೂರು ನಗರ ಪೋಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಶ್ರೀಕಾಂತ್, ಪುತ್ತೂರಿನ ಹಿರಿಯ ವೈದ್ಯರಾದ ಶ್ರೀ ಪ್ರಸಾದ್ ಭಂಡಾರಿ, ಪುರಸಭಾ ಸದಸ್ಯರುಗಳು ಹಾಗೂ ಮುಖ್ಯಾಧಿಕಾರಿ ಶ್ರೀ ಎ.ಎಸ್.ರಾಣೆ ಉಪಸ್ಥಿತರಿದ್ದರು.

 


         ದಿನಾಂಕ 11/11/2009ರಂದು ಪುತ್ತೂರು ಪುರಸಭೆಯ ವತಿಯಿಂದ ಚಿಣ್ಣರ ಉದ್ಯಾನವನ ಹಾಗೂ ಪುರಸಭೆಯ ಅಭಿವೃಧ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಮಾನ್ಯ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಸಾಂಕೇತಿಕವಾಗಿ ನೆರವೇರಿಸಿ ತದನಂತರ ಪುತ್ತೂರು ಪುರಭವನದಲ್ಲಿ ಪುರಸಭಾಧ್ಯಕ್ಷರಾದ ಶ್ರೀ ರಾಜೇಶ್ ಬನ್ನೂರು ರವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ಸಹಾಯಕ ಕಮೀಷನರ್ ಹರೀಶ್ ಕುಮಾರ್ , ತಾಲೂಕು ಪಂಚಾಯತ್ ಅಧ್ಯಕ್ಕ್ಷರಾದ ಸಾವಿತ್ರಿ ಶಿವರಾಮ್ , ತಾಲೂಕು ಪಂಚಾಯತ್ ಉಪಾಧ್ಯಕ್ಕ್ಷರಾದ ರಾಧಾಕೃಷ್ಣ ಬೋರ್ಕರ್, ಪುತ್ತೂರು ಪುರಸಭೆಯ ಮುಖ್ಯಾಧಿಕಾರಿ ಎ.ಎಸ್. ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಕ್ಷರಾದ ಜೀವಂಧರ್ ಜೈನ್, ಪುತ್ತೂರು ಪುರಸಭೆಯ ಉಪಾಧ್ಯಕ್ಕ್ಷರಾದ ಮಾಧವ ಬೆದ್ರಾಳ ಮತ್ತು ಇತರರು ಉಪಸ್ಥಿತರಿದ್ದರು.


    ದಿನಾಂಕ 04/11/2009ರಂದು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆಯು ಪುರಸಭಾ ಸಭಾಂಗಣದಲ್ಲಿ ಮಾನ್ಯ ಪುರಸಭಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರಗಿತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮತ್ತು ಡಿ.ಇ.ಒ. ಆಗಮಿಸಿ ವೀಡಿಯೋ ಸಿಡಿಯ ಮೂಲಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಬಗ್ಗೆ  ಅಗತ್ಯ ಮಾಹಿತಿ ನೀಡಿದರು. ಪುರಸಭಾ ವ್ಯಾಪ್ತಿಯ ವಿವಿಧ ಆಸ್ಪತ್ರೆಗಳ / ನರ್ಸಿಂಗ್ ಹೋಂ ಗಳ ವೆದ್ಯರು ಮತ್ತು ಸಿಬ್ಬಂದಿಗಳು ಆಗಮಿಸಿ ಅವರಿಗೆ ಸಂಬಂಧಪಟ್ಟ ಆಸ್ಪತ್ರೆಯಲ್ಲಿನ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ವಿಧಾನದ ಬಗ್ಗೆ ಚರ್ಚಿಸಿದರು.


ದಿನಾಂಕ 28/10/2009 ರಂದು ಪುರಸಭೆ ಪುತ್ತೂರು ಎಸ್.ಡಬ್ಲು.ಎಮ್. ವತಿಯಿಂದ ಪುತ್ತೂರು ಪುರಸಭಾ ವ್ಯಾಪ್ತಿಯ ಶಾಲಾ ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಇವರು ದೀಪ ಬೆಳಗುವುದರ ಮೂಲಕ ನೆರವೇರಿಸಿದರು ಹಾಗೂ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ಬನ್ನೂರು ಇವರು ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ದಿ: 01/11/09 ರ ಕನ್ನಡ ರಾಜ್ಯೋತ್ಸವ ದಿನದಂದು ಪುತ್ತೂರು ಪುರಭವನದಲ್ಲಿ ವಿತರಿಸಲಾಯಿತು.    

        


               ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರು, ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು ಹಾಗೂ ಪುತ್ತೂರು ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಿಕೇಂದ್ರೀಕೃತ ಪೌರಕಾರ್ಮಿಕರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ವಿಲೇವಾರಿ ಬಗ್ಗೆ ದಿನಾಂಕ: 19/01/2009 ಮತ್ತು 20/01/2009 ರಂದು ಪುತ್ತೂರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಸದ್ರಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಪಿ.ಜಿ.ರಮೇಶ್, ಯೋಜನಾ ನಿರ್ದೇಶಕರು, ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶ ಇವರು ನೆರವೇರಿಸಿದರು. ವೇದಿಕೆಯಲ್ಲಿ ಮಾನ್ಯ ಪುತ್ತೂರು ಪುರಸಭಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಮಾನ್ಯ ಸಹಾಯಕ ಕಮಿಷನರ್, ಪುತ್ತೂರು ಉಪವಿಭಾಗ, ಮಾನ್ಯ ತಹಶೀಲ್ದಾರರು, ಪುತ್ತೂರು ತಾಲೂಕು, ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧೀಕ್ಷಕರು  ಪುತ್ತೂರು ಪುರಸಭಾ ಮುಖ್ಯಾಧಿಕಾರಿಗಳು ಮತ್ತು ಮಂಗಳೂರು ಮಹಾನಗರಪಾಲಿಕೆ, ಉಳ್ಳಾಲ ಪುರಸಭೆ, ಬಂಟ್ವಾಳ ಪುರಸಭೆ, ಸುಳ್ಯ ನಗರ ಪಂಚಾಯತ್ ಗಳ ಶಹರೀ ರೋಜ್ ಗಾರ್ ಯೋಜನೆಯ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.


ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಸುರೇಶ್ ಕುಮಾರ್.ಎಸ್ ಇವರು ಪುತ್ತೂರು ಪುರಸಭಾ ಕಛೇರಿಗೆ ದಿ:12/01/09 ರಂದು ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಪುರಸಭಾ ಕಛೇರಿ ಸಭಾಂಗಣದಲ್ಲಿ ಪುರಸಭಾ ಸದಸ್ಯರು,  ಸಿಬ್ಬಂದಿಗಳು. ಗಣ್ಯವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ, ಪುತ್ತೂರು ನಗರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.


    ದಿ: 15/10/2008ರಂದು ಪುತ್ತೂರು ಪುರಸಭೆಯ ಶೇ.18ರ ನಿಧಿಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಪುತ್ತೂರು ಪುರಸಭೆಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಬದುಕು ಶಿಕ್ಷಣ, ಆರ್ಥಿಕ ಸ್ವಾವಲಂಬನೆ, ಆರೋಗ್ಯ ಪರಿಸರ ಸ್ವಚ್ಛತೆ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ? ಮತ್ತು ಕೌಶಲ್ಯತೆ ಸಂವಹನ ವ್ಯಕ್ತಿತ್ವ ವಿಕಸನದ ಕುರಿತು ಮಾಹಿತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಹಾಗೂ ಎಲ್ಲ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪುರಸಭೆಯ ಸಮುದಾಯ ವ್ಯವಹಾರಗಳ ಅಧಿಕಾರಿ, ಸಮುದಾಯ ಸಂಘಟಕರು ಹಾಗೂ ಪುರಸಭಾ ಸಿಬ್ಬಂದಿಗಳು ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.


                   

  ಪುತ್ತೂರು ಪುರಸಭೆಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ಸ್ಪರ್ಧಾ ಕಾರ್ಯಕ್ರಮಗಳಾದ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ದಿ: 02/10/2008ರಂದು ಪುತ್ತೂರು ಪುರಸಭೆಯ ಪುರಭವನದಲ್ಲಿ ನಡೆಸಲಾಗಿರುತ್ತದೆ. ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಮುಖ್ಯಸ್ಥರು, ಪುರಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಹಾಗೂ ಎಲ್ಲ ಪ್ರತಿನಿಧಿಗಳು ಉಪಸ್ಥಿತರಿದ್ದರು.